ನಮ್ಮ ಸಂಪದ ಸಾಲು ಪತ್ರಿಕೆ ಮತ್ತು ಸಂಪದ ಫೌಂಡೇಶನ್ ಸಾಗರದ ವತಿಯಿಂದ ನೆಡೆದ ರಾಜ್ಯ ಮಟ್ಟದ ಕತೆ /ಕವನ ಸ್ಪರ್ಧೆಯ ಫಲಿತಾಂಶ ನಾಡಿನ ಹೆಮ್ಮೆಯ ಸಾಹಿತಿಗಳಾದ ಡಾ. ನಾ. ಡಿಸೋಜ ಅವರಿಂದ ಪ್ರಕಟವಾಯಿತು.
ಪಾಸಿಟಿವ್ ಜರ್ನಲಿಸಂಗೆ ಹೆಸರಾದ ಜನಪ್ರಿಯ ಸಂಪದಸಾಲು ಮಾಸಪತ್ರಿಕೆಯ 11 ನೆಯ ವರ್ಷದ ಸಂಭ್ರಮಕ್ಕೆ ಆಯೋಜಿಸಿದ್ದ ರಾಜ್ಯ ಮಟ್ಟದ ಕಥೆ\ಕವನ ಸ್ಪರ್ಧೆಯ
ಫಲಿತಾಂಶ . ಒಟ್ಟು 1891 ಕವಿತೆಗಳೂ, 819 ಕಥೆಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವು.
ರಾಜ್ಯ, ಹೊರ ರಾಜ್ಯ, ವಿದೇಶಗಳಿಂದಲೂ ಬರಹಗಾರರು ಭಾಗವಹಿಸಿದ್ದರು. ಇದನ್ನು 8 ತೀರ್ಪುಗಾರರ ತಂಡ ಪರಿಶೀಲಿಸಿ ಅಂತಿಮವಾಗಿ ಖ್ಯಾತ ಸಾಹಿತಿಗಳಾದ ಡಾ. ನಾ. ಡಿಸೋಜರವರ ಜೊತೆ ಚರ್ಚಿಸಿ
ಅಂತಿಮಗೊಳಿಸಲಾಯಿತು. ಫಲಿತಾಂಶವನ್ನು ಶ್ರೀ. ನಾ.ಡಿಸೋಜಾರವರು ಪ್ರಕಟಿಸಿದರು.
ಕಥಾ ಸ್ಪರ್ಧೆಯ
ಫಲಿತಾಂಶದ ವಿವರ ಇಂತಿದೆ.
ಪ್ರಥಮ ಬಹುಮಾನ 7500 ರೂ. ಮಣಿಪಾಲಿನ ಮಂಜುನಾಥ ಹಿಲಿಯಾಣರವರ (ಸೀತಾಪ್ರಲಾಪ),
ದ್ವಿತೀಯ ಬಹುಮಾನ 4000 ರೂ. ವಿಷ್ಣು ಭಟ್ ಹೊಸ್ಮನೆಯವರ -(ಪಯಣ)
ತೃತೀಯ ಬಹುಮಾನ 2500 ರೂ ಹೈದರಾಬಾದಿನ ಅರ್ಪಣಾ ಎಚ್.ಎಸ್ ರವರ (ಪಂಕ್ತಿ ಬೇಧ) ಕಥೆಗಳು ಬಹುಮಾನ ಪಡೆದುಕೊಂಡವು.
ಕವನ ಸ್ಪರ್ಧೆ ಫಲಿತಾಂಶ
ಪ್ರಥಮ ಬಹುಮಾನ 3000 ರೂ ಕಾಸರಗೋಡಿನ ಡಾ:ರತ್ನಾಕರ ಮಲ್ಲಮೂಲೆ ಅವರ (ಭೂತ)
ದ್ವಿತೀಯ ಬಹುಮಾನ 2000 ತೀರ್ಥಹಳ್ಳಿಯ ವಿನಾಯಕ ಅರಳಸುರಳಿಯವರ (ದೇವರ ಹೊತ್ತವನು)
ತೃತೀಯ ಬಹುಮಾನ 1000 ರೂ ಸೊರಬದ ಡಾ. ಅಜಿತ್ ಹೆಗಡೆ , ಹರೀಶಿಯವರ (ವೇದಾಂತದ ವಿಗತ) ಕವನಗಳು ಬಹುಮಾನ ಪಡೆದುಕೊಂಡಿವೆ.
ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು (ಪ್ರಯೋಗ)-ಸಿ.ಜು ಪಾಶಾ ಶಿವಮೊಗ್ಗ, (ಒಂದು ಸೀರೆಯ ಕಥೆ-) ಪರಮೇಶ್ವರ ಕರೂರು ಸಾಗರ, (ಚಿರಂಜೀವಿ)-ದತ್ತಗುರು ಕಂಠಿ ಬನವಾಸಿ, (ತುಂಡು ಭೂಮಿ)-ಪ್ರಶಾಂತ ಎ.ಎಸ್ ಹಂಪಿ, (ದೈವವಾಕ್ಕು)-ಡಾ:ಟಿ.ಗೋವಿಂದರಾಜು ಬೆಂಗಳೂರು, (ಪೇಯಿಂಗ್ ಗೆಸ್ಟ್)-ರೋಷನ್ ಸಿಕ್ವೆರಾ ಮಂಗಳೂರು, (ಕಾವು)-ಟಿ.ಎಂ.ಜಗದೀಶ ಶಿರಸಿ, (ಚೌಡನೂ ಮತ್ತು ಒಕ್ಕಲುತನವೂ)-ರಮೇಶ ನೆಲ್ಲೀಸರ ತೀರ್ಥಹಳ್ಳಿ, (ಸಂದರ್ಶನ)-ಜಿ.ನಾಗರಾಜ ಬೆಂಗಳೂರು, (ಮರುಹುಟ್ಟು)-ತೈರೊಳ್ಳಿ ಮಂಜುನಾಥ ಉಡುಪ ಮಂಡ್ಯ.
ತೀರ್ಪುಗಾರರ ಮೆಚ್ಚುಗೆ ಪಡೆದ ಕವಿತೆಗಳು
(ಸಾಕ್ಷಿ)-ರಾಘವೇಂದ್ರ ಶೆಡ್ತಿಕೆರೆ ಸಾಗರ, (ಮಣ್ಣು)-ಸೋಮು ಕುದುರೀಹಾಳ ಕೊಪ್ಪಳ,( ಈ ಕಾಂಕ್ರೀಟ್ ಕಾಡಿನಲ್ಲಿ)-ಸ್ವಾಮಿ ಪೊನ್ನಾಚಿ ಚಾಮರಾಜನಗರ, (ಹಿಂಬಾರದಿರುವನೆ-)ಅನಿತಾ ಪೂಜಾರಿ ಮುಂಬೈ, (ಮಾನವ)-ಸುಧಾ ತೇಲ್ಕರ್ ಮಹಾರಾಷ್ಟ್ರ, (ಭೀಷ್ಮಾಂತರಂಗ)-ನಿರ್ಮಲಾ ಹೆಗಡೆ ಗೋಳೀಕೊಪ್ಪ ಶಿರಸಿ, (ಮನುಷ್ಯರ ಮಾತು ಕೇಳಿಸುತ್ತಿಲ್ಲ)-ಎನ್.ರವಿಕುಮಾರ ಶಿವಮೊಗ್ಗ, (ರಕ್ತರಾತ್ರಿ)-ರಾಜೇಂದ್ರಪ್ರಸಾದ ಮಂಡ್ಯ, (ಬಣ್ಣದ ಬೇಲಿ)-ಎನ್.ಆರ್ ರೂಪಶ್ರೀ ಮೈಸೂರು, (ದೇವಿಯವಳೆನಗೆ)-ಗುರುಪ್ರಸಾದ ಕಾನ್ಲೆ ಸಾಗರ.
ಅಕ್ಟೋಬರ್ 2018 ರಲ್ಲಿ ನಡೆಯುವ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬಹುಮಾನ ನೀಡುವುದರೊಂದಿಗೆ ವಿಶೇಷ ಸಂಚಿಕೆ ಕೂಡಾ ಲೋಕಾರ್ಪಣೆಗೊಳ್ಳಲಿದೆ ಎಂದು ತಿಳಿಸಲು ಹರ್ಷಿಸುತ್ತೇನೆ.
ಮತ್ತೊಮ್ಮೆ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು.
ವೆಂಕಟೇಶ ಸಂಪ
ಸಂಪಾದಕರು
ಸಂಪದ ಸಾಲು ಕಛೇರಿ.
ಅಂಚೆ ಪೆಟ್ಟಿಗೆ ಸಂಖ್ಯೆ 32
ಸಾಗರ 577401.
9448219347
sampadasaalu@gmail.com
*************