ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?!
*ವೆಂಕಟೇಶ ಸಂಪ
ಮೈಸೂರಿನಲ್ಲಿ ಬಿಬಿಎಂ ಓದುತ್ತಿದ್ದ ಸಂದರ್ಭ!ನಮ್ಮ ಮಹಾರಾಜ ಕಾಲೇಜು ಬೇಗ ಮುಗಿಯುತ್ತಿತ್ತು.ಮದ್ಯಾನ್ಹ ಮೂರು ಗಂಟೆಯ ನಂತರ ಸಾಕಷ್ಟು ಸಮಯವಿರುತ್ತಿತ್ತು.ಸಯ್ಯಾಜಿ ರಾವ್ ರಸ್ತೆಯಲ್ಲಿರುವ ಪುಸ್ತಕದ ಅಂಗಡಿಯಲ್ಲಿ ಸೆಕೆಂಡ್ ಹ್ಯಾಂಡ್ ಪುಸ್ತಕ ಮಾರುವವನೊಬ್ಬನಿಗೆ ಪಾರ್ಟ್ ಟೈಮ್ ಸಹಾಯ ಮಾಡುತ್ತಿದ್ದೆ.ಅದಕ್ಕೆ ಪ್ರತಿಯಾಗಿ ಆತ ನಂಗೆ ಓದಲು ಪುಸ್ತಕ ಕೊಡುತ್ತಿದ್ದ.ಸಂಜೆ ಹೊತ್ತಿಗೆ ಬಿಸಿ ಬಿಸಿ ಬೋಂಡ ಮತ್ತು ಕಾಫಿಯನ್ನು ಕೊಡಿಸುತ್ತಿದ್ದ.ಹೀಗೆ ಸಂಜೆಯವರೆಗೂ ಒಂದು ರೀತಿಯಲ್ಲಿ ಸರಸ್ವತಿ ಪುತ್ರನಾಗುವ ಅವಕಾಶ ನೀಡುತ್ತಿದ್ದ ಆತನ ಮೇಲೆ ಒಂತರಾ ಗೌರವ ಮೂಡಿತ್ತು.....!
ಒಂದು ದಿನ......! ಹೀಗೆ ಪುಸ್ತಕಗಳ ಜೊತೆ ವ್ಯಾಪಾರ ವ್ಯವಹಾರ ಮುಗಿಸಿ ಸುಮ್ಮನೆ ಸಿಟಿ ರೌಂಡ್ಸ್ ಹೊಡೆಯೋಣ ಅಂತ ಏಕಾಂಗಿಯಾಗಿ ಪೇಟೆ ಸುತ್ತಲು ಶುರು ಮಾಡಿದೆ....ಅಹಾ.....ಅದೆಷ್ಟು ವೈಯ್ಯಾರ....ಅದೆಷ್ಟು ಬಿನ್ನಾಣ....ಈ.ದೇವರಾಜುಅರಸು ರಸ್ತೆ!? ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣೊ ಈ ಮೈಸೂರು....ಈ ರಸ್ತೆಯಲ್ಲಿ ಮಾತ್ರ ಒಂತರಾ ವಿಭಿನ್ನವಾಗಿತ್ತು...ಸ್ವಲ್ಪ ಹೈಫೈ ಟಚ್ ಹೊಂದಿದ್ದ ಈ ರಸ್ತೆಯ ತುಂಬಾ ವ್ಯಾಪರಸ್ತರದ್ದೇ ಕಾರುಬಾರು?!ಎಲ್ಲಿ ನೋಡಿದರಲ್ಲಿ ಬರೀ ಕನ್ನಡಿಯೊಳಗಿನ ಗಂಟುಗಳೇ ಇದ್ದವು..ಆ ಕೈಗೆಟುಕದ ಗಾಜಿನ ಒಳಗೆ ಗೊಂಬೆಗಳು.....ಅದರ ಜೊತೆ ಬಟ್ಟೆಗಳ ಬರದ ಮಾರಾಟ.....ಅಲ್ಲಲ್ಲಿ ನಿಲ್ಲಿಸಿದ ಕಾರುಗಳು....ಮತ್ತೊಂದಿಷ್ಟು ಬೈಕುಗಳು..ಇಡೀ ರಸ್ತೆಗೆ ಒಂದೇ ಮರ!..ಪ್ರತಿಯೊಬ್ಬರು ತಮ್ಮ ಅಂಗಡಿಯ ಸ್ವಚ್ಚವಾಗಿರಿಸಿಕೊಳ್ಳುವ ಬರದಲ್ಲಿ ರಸ್ತೆಗೆ ಕಸ ಎಸೆದ ಮಂದಿ....ಶೋಕಿಯೇ ಶ್ರೀಮಂತಿಕೆ ಅನಿಸಿಕೊಂಡು ಖರೀದಿಗೆ ಬಂದ ಜನಗಳು....ಹೀಗೆ ನೋಡುತ್ತಾ ಮುಂದೆ ಸಾಗಿದೆ!.....
ಹಾಗೆ ಸಂದಿಗಳ ಒಳಹೊಕ್ಕಾಗ ಅಲ್ಲೇ ಇಕ್ಕೆಲಗಳಲ್ಲೆ ಚಿಕ್ಕ ಚಿಕ್ಕ ಗುಡಿಸಲು ಇತ್ತು....ಅದನ್ನೆಲ್ಲಾ ನೋಡುತ್ತಾ ತಣ್ಣನೆಯ ಗಾಳಿ ಸವಿಯುತ್ತಾ ದಾರಿಯುದ್ದಕ್ಕೂ ಕಂಡ ಕಂಡದ್ದನ್ನೆಲ್ಲಾ ನೋಡುತ್ತಾ...ರಸ್ತೆಯ ಮದ್ಯದಲ್ಲಿ ಅಪರೂಪಕ್ಕೆ ಕಾಣುವ ಕಾಲೇಜಿಗೆ ಹೋಗುವರಂತೆ ಕಾಣುವ ಬಣ್ಣದ ಚಿಟ್ಟೆಗಳನ್ನು ಗಮನಿಸುತ್ತಾ.....ಅವರ ಸೌಂದರ್ಯಕ್ಕೆ ನನಗೆ ನಾನೇ ಗುನುಗುತ್ತಾ........ಸುತ್ತಾಡುತ್ತಲೇ ಸುಮಾರು ಸಮಯ ಕಾಲ ಕಳೆದೆ.......!?
ರಾತ್ರಿ ಹೊತ್ತು ಬಾಯಿ ಚಪಲ....ರಸ್ತೆ ಬದಿಯ ಪಾನಿಪುರಿ ಅಂದ್ರೆ ಬಾಳ ಪ್ರೀತಿ....ಗೋಲುಗುಪ್ಪ ಮಾರುತ್ತಿದ್ದವನನ್ನು ನೋಡಿದ ನನಗೆ ಅಪರೂಪಕ್ಕೆ ಪರಿಚಿತ ಸಿಕ್ಕಾಗ ಆಗ ಖುಷಿ ಆಯ್ತು...ಐವತ್ತು ಪೈಸೆಗೆ ಒಂದು ಪೂರಿ....ಐದು ರೂಪಾಯಿಗೆ ಹತ್ತು ಪೂರಿ ಕೊಡುವವನು.....12 ಪೂರಿ ಕೊಟ್ಟ.....ಮಳೆ ಬರತ್ತೆ....ಅದ್ಕೆ ಕ್ಲೋಸ್ ಮಾಡ್ತೀನಿ ಅಂದ......ಸರಿ ಮನಸ್ಸಲ್ಲೊಂದು ತ್ಯಾಂಕ್ಸ್ ಅಂದ್ಕೊಂಡು ಅಲ್ಲಿಂದ ಮತ್ತೆ ಸಯ್ಯಾಜಿ ರಾವ್ ರಸ್ತೆ ಸೇರಿದೆ...ಮಳೆ ಶುರುವಾತು....!
..ಕೆ ಆರ್ ಸರ್ಕಲ್ ಸೇರಲು ಇನ್ನು ಹತ್ತು ನಿಮಿಷ ನೆಡೆಯಬೇಕಿತ್ತು...ತುಂತುರು ಮಳೆಯಲ್ಲಿ ತಲೆ ಮೇಲೆ ಕರ್ಚೀಫ್ ಹಕ್ಕೊಂಡು ನಿದಾನ ನೆಡೆದು ಬಂದೆ....ಕೆ ಆರ್ ಸರ್ಕಲ್ ಹತ್ತಿರದ ದೊಡ್ಡ ಗಡಿಯಾರ ಹತ್ತು ಗಂಟೆ ತೋರಿಸುತ್ತಿತ್ತು...!
ಆ ರಸ್ತೆಯ ಬದಿಯಲ್ಲೊಬ್ಬ ನಿಂತು ಎನೋ ಹುಡುಕುತ್ತಿದ್ದ!ಚಿಟಿ ಚಿಟಿ ಮಳೆ...ನಾನಿದ್ದ ತಾತಯ್ಯ ಅನಾಥಾಲಯ ಹಾಸ್ಟೆಲ್ ಗೆ ಸಂಜೆ ಏಳು ಮುಕ್ಕಾಲು ಒಳಗೆ ಹೋಗಬೇಕಿತ್ತು....ವಾರ್ಡನ್ ಗೆ ಗೊತ್ತಾಗದೆ ಒಳಗೆ ಹೋಗಲು ಮನಸಿನೊಳಗೆ ಪ್ಲಾನ್ ಮಾಡುತ್ತಾ ಹೋಗುತ್ತಿದ್ದ ನನಗೆ ಏನೋ ಹುಡುಕುವ ಈ ವ್ಯಕ್ತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಕನಿಸಲಿಲ್ಲ... ರಸ್ತೆ ದಾಟುವ ಹೊತ್ತಿಗೆ ಆತ ಹೋಯ್ ಹೋಯ್ ಯಾರೀದಿರಾ?!ಅಂತಾ ಕೂಗಾಡಿದ..!
ತತ್ತೆರಿಕೆ ಯಾಕಪ್ಪಾ ಈತ ಕರಿತಾವ್ನೆ....ಯಾರದ್ರು ಕುಡುಕ ಇರ್ಬಹುದು ಅಂತ ಮತ್ತೆ ತಿರುಗಿ ಹೊರಟೆ...ಆತ ಮತ್ತೆ ಕೂಗಿದ....ಅಣ್ಣಾ ಯಾರದ್ರೂ ಇದಿರಾ?ಆ ಕಡೆ ದಾಟಸ್ತಿರಾ?!... ಕೇಳಿದ....
ಸರಕ್ಕೆಂದು ಓಡಿ ಬಂದೆ...ಆತನ ಕೈ ಹಿಡಿದು ದಾಟಿಸಿದೆ...ಹಾಳದ್ದು ಕಂಡ ಕಂಡವರ ಬಗ್ಗೆ ತಿಳಿದುಕೊಳ್ಳುವ ಕುತೋಹಲ....ಸಾರ್ ಯಾವ್ದು ನಿಮ್ಮೂರು?ಎನ್ಮಾಡ್ತೀರಿ?ಹುಟ್ಟಿನಿಂದಲೇ ಕಣ್ಣು ಕಾಣಲ್ವಾ?ಹೀಗೆ ಪ್ರಶ್ನೆ ಕೇಳಿದೆ....
ಆತನಿಗೆ ಏನನ್ನಿಸಿತೋ ಏನೋ....ಸಾರ್ ನನ್ನನ್ನು ಆ ಹೂವಿನ ಮಾರ್ಕೆಟ್ ಹತ್ರ ಬಿಡ್ತಿರಾ?ಅಂದ..ಸರಿ ಅಂದೆ..ಹೊರಟೆ...ಆತ ತನ್ನ ಕತೆ ಶುರು ಮಾಡಿದ....!
ನನ್ನೂರು ಪಿರಿಯಾ ಪಟ್ಟಣದ ಹತ್ರ ಒಂದು ಹಳ್ಳಿ...ಅಲ್ಲೆ ಓದಿದ್ದು.ನಂಗೆ ತಿಳುವಳಿಕೆ ಬರೋದ್ರೊಳಗೆ ಅಪ್ಪ ಅಮ್ಮ ಇರ್ಲಿಲ್ಲ...ಏಳನೆ ಕ್ಲಾಸ್ ಮುಗಿಯೋ ಹೊತ್ತಿಗೆ ಕಣ್ಣುಗಳು ಮಂಜಾಗತೊಡಗಿತು...ಇದ್ದಕ್ಕಿದ್ದಂತೆ ಕೆಲವೇ ದಿನಗಳಲ್ಲಿ ಕಣ್ಣು ಪೂರ್ತಿಯಾಗಿ ಕಾಣದಾಯಿತು....!
ಅಶಕ್ತನಾದವನನ್ನು ಯಾರು ನೊಡ್ಕೋತಾರೆ?!ಆಸ್ಪತ್ರೆಗೆ ಕರ್ಕೋಂಡು ಹೋಗೋ ನೆಪ ಮಾಡ್ಕೊಂಡು ನಮ್ಮಣ್ಣ ಮೈಸೂರಿನ ಬಸ್ ಸ್ಟ್ಯಾಂಡ್ ನಲ್ಲಿ ಬಿಟ್ಟು ಹೋದವನು ಎಲ್ಲಿ ಹೋದನೋ ಗೊತ್ತಿಲ್ಲ....ಇಲ್ಲೊಬ್ಬ ಹೂವು ಹಣ್ಣು ಮಾರುತ್ತಿದ್ದ.ಆತನೇ ನನ್ನನ್ನು ತನ್ನ ಜೊತೆ ಇಟ್ಕೊಂಡ.ಆತನ ಕೆಲ್ಸಕ್ಕೆ ನನ್ನ ಕೈಲಾದ ಸಹಾಯ ಮಾಡ್ತಿನಿ.ಆತ ನಂಗೊಂದು ಜೀವನ ಕೊಟ್ಟಿದ್ದಾರೆ..ಕೆ ಆರ್ ಆಸ್ಪತ್ರೆಗೆ ಹೋಗ್ಬಂದೆ..ಕಣ್ಣು ಬರಲ್ಲ ಅಂದ್ರು.ಆದ್ರೆ ದೊಡ್ಡ ಆಸ್ಪತ್ರೆಗೆಲ್ಲಾ ಹೋಗೋ ಶಕ್ತಿ ಇಲ್ಲ...ಹುಟ್ಟು ಕುರುಡ ಆಗಿದ್ರೆ ಬೇಸರವಿರ್ಲಿಲ್ಲ.ಆದ್ರೆ ಅಂದು ಒಂದಷ್ಟು ಜಗತ್ತನ್ನು ನೋಡಿದ ನನಗೀಗ ಜಗತ್ತೇ ಕತ್ತಲು!
ಅಂದು ಆಡಿದ ಆಟ...ಓಡಾಡಿದ ಜಾಗ...ಕಂಡ ಜನ...ಹಸಿರು ಹೊಲ....ನಮ್ಮೂರ ಕೆಂಪು ಬಸ್ಸು.....ಮನೆಯಲ್ಲಿ ಸಾಕಿದ್ದ ಬೀಳಿ ನಾಯಿ ಮರಿ.....ಇವೆಲ್ಲಾ ನಂಗೆ ಈಗ ನೆನಪುಗಳು ಮತ್ತು ಸಂಪೂರ್ಣ ಕತ್ತಲು!?!
ಯಾರಿಗೆ ಹೇಳಲಿ...?!ಊಟ ತಿಂಡಿ ನೆಡೆದಾಡೋದು..ಶೌಚ ಹೀಗೆ ಪ್ರತಿಯೊಂದಕ್ಕು ಇನ್ನೊಬ್ಬರನ್ನು ಕಾಯಬೇಕು...ಕೆಲವರು ಹೆಲ್ಪ್ ಮಾಡ್ತಾರೆ...ಕೆಲವರು ಓಡಿ ಹೋಗ್ತಾರೆ....
ಏನು ಮಾಡಲಿ...ಹೇಳಿ......"ಬದುಕಲೇ ಬೇಕಲ್ರಿ.....ಸಾವು ಬರುವ ತನಕ......"ಅಂದ......
ಯಾಕೋ...ಏನೋ .....ಮಾತಾಡಲು ಆಗಲಿಲ್ಲ......ಮೌನವೇ ಉತ್ತರವಾಗಿತ್ತು....ಆತನ ಕೈ ಹಿಡಿದಿದ್ದೆ......ಬೆನ್ನು ಸವರಿದೆ....ಅಣ್ಣಾ......ದೇವರು ಯಾಕೆ ಹೀಗೆ ಮಾಡ್ತಾನೋ ಗೊತ್ತಿಲ್ಲ.......ಆದರೆ ಈ ಕೆಟ್ಟ ಜಗತ್ತಿನಲ್ಲಿ ಹೊರ ನೋಟದ ಪ್ರಪಂಚಕ್ಕೆ ಕುರುಡರಾಗಿರಬಹುದು...ನಿಮ್ಮ ಒಳ ಕಣ್ಣು ಯಾವಾಗಲು ತೆರೆದಿದೆ......ಮುಂದೆ ಒಳ್ಳೆ ದಿನ ಬರುತ್ತದೆ ಅಣ್ಣಾ....ಅಂದೆ.....ಬೇರೆನೂ ಸಹಾಯ ಮಾಡದಷ್ಟು ಅಸಹಾಯಕನಾಗಿದ್ದೆ......ಮಳೆ ಬೀಳುತ್ತಿತ್ತು...!ನನ್ನ ಮತ್ತು ಅವನ ಕಣ್ಣಿನಿಂದ ಬೀಳುತ್ತಿದ್ದ ನೀರು ಅದೇ ಮಳೆ ನೀರಿನ ಜೊತೆ ಬೆರೆತು ಹೋಗುತ್ತಿತ್ತು....!....ಆತನಿಗೆ ಕಣ್ಣಿಲ್ಲ....ಆದರೆ ಕಣ್ಣೀರಿದೆ........
ದೂರದಿಂದ ಹಾಡೊಂದು ಕೇಳತೊಡಗಿತು....."ಮುರಿದು ಬಿದ್ದ ಕೊಳಲು ನಾನು...ನಾದವಿರದು ನನ್ನಲಿ.........ಸುನಾದವಿರದು ನನ್ನಲಿ"......ಅಂತ.
ಆ ನಂತರ ಡಿಗ್ರಿ ಮುಗಿಯುವವರೆಗೂ ಆತನನ್ನು ಭೇಟಿ ಆಗುತ್ತಿದ್ದೆ....ಹತ್ತು ನಿಮಿಷ ಮಾತಾಡಿಸಿ ಬರುತ್ತಿದ್ದೆ........ಮೊನ್ನೆ ಮೈಸೂರಿಗೆ ಹೋದಾಗ ಅಲ್ಲಿ ಹೋಗಿದ್ದೆ...ಅಲ್ಲಿ ಆತ ಇರಲಿಲ್ಲ...ಹೂವು ಮಾರುವವನೂ ಇರಲಿಲ್ಲ..ಅಲ್ಲೀಗ ಕೆಲವು ಕಮರ್ಷಿಯಲ್ ಕಟ್ಟಡಗಳಿದ್ದವು....ಅಲ್ಲೀಗ ದೊಡ್ಡ ಬುಸಿನೆಸ್ ಮಾಡುವ ಮಂದಿ ಇದ್ದರು....!!!!
ಮಾತಾಡಲೂ ಯಾರೂ ಇರಲಿಲ್ಲ.............ಉಳಿದದ್ದು ಆಗಿನ ನೆನಪುಗಳು ಮತ್ತು ಈಗ ಕಾಣುತ್ತಿರುವ ಮಾತೇ ಆಡದ ದೊಡ್ಡ ಬಿಲ್ಡಿಂಗ್ ಗಳು......!?!
"ಬದಲಾವಣೆ ಬರಲಿ,ಪರಿವರ್ತನೆ ತರಲಿ.ಇದು ಸಂಪದ ಸಾಲು ಪತ್ರಿಕಾ ಅಭಿಯಾನ...ಎನ್ನುತ್ತಾ ಪತ್ರಿಕಾ ಅಭಿಯಾನಕ್ಕೆಂದು ಮೈಸೂರಿಗೆ ಹೋದ ನನಗೆ ಕಾಡಿದ ಹಳೆ ನೆನಪುಗಳಿವು..........
# ಓದಿ ಸಂಪದ ಸಾಲು
Wednesday, November 23, 2016
ಆತನಿಗೆ ಕಣ್ಣಿರಲಿಲ್ಲ.....ಆದರೆ ಕಣ್ಣೀರಿತ್ತು!?! *ವೆಂಕಟೇಶ ಸಂಪ
Saturday, October 22, 2016
ಪ್ರೀತಿಯ ಓದುಗ ಪ್ರಭುಗಳೇ, ಇವತ್ತು ನಮ್ಮ ಸಂಪದ ಸಾಲು ಪತ್ರಿಕೆ ಇಷ್ಟೊಂದು ಬೆಳೆಯುವುದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ ಎನ್ನಲು ಹೆಮ್ಮೆಯೆನಿಸುತ್ತದೆ. ಕೇಳಿದ ಕೂಡಲೇ ಪತ್ರಿಕೆಯ ಸದಸ್ಯತ್ವ ಕೊಟ್ಟ ನಿಮಗೆ ನಾನು ಋಣಿ. ನಿಮ್ಮಲ್ಲೊಂದು ಸಣ್ಣ ಮನವಿ.
ಇವತ್ತು ನಮ್ಮ ಸಂಪದ ಸಾಲು ಪತ್ರಿಕೆ ಇಷ್ಟೊಂದು ಬೆಳೆಯುವುದಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವೇ ಕಾರಣ ಎನ್ನಲು ಹೆಮ್ಮೆಯೆನಿಸುತ್ತದೆ.
ಕೇಳಿದ ಕೂಡಲೇ ಪತ್ರಿಕೆಯ ಸದಸ್ಯತ್ವ ಕೊಟ್ಟ ನಿಮಗೆ ನಾನು ಋಣಿ.
ನಿಮ್ಮಲ್ಲೊಂದು ಸಣ್ಣ ಮನವಿ.
31000 ಸದಸ್ಯರನ್ನು ಹೊಂದಿರುವ ನಮ್ಮ ಪತ್ರಿಕೆಯ ಓದುಗರ ಸದಸ್ಯರ ಸಂಖ್ಯೆಯನ್ನು 1 ಲಕ್ಷ ಮಾಡಲೇಬೇಕೆಂಬ ಸಂಕಲ್ಪ ಮಾಡಿದ್ದೇವೆ. ಇದಕ್ಕೆ ನೀವು ಮಾಡಬೇಕಾದ್ದಿಷ್ಟೆ.ಒಂದೊಂದು ಸದಸ್ಯರು ಕನಿಷ್ಟ 20 ಜನ ಹೊಸ ಸದಸ್ಯರನ್ನು ಮಾಡಿಕೊಡಿ. ನಿಮ್ಮ ಹಾಗು ನಿಮ್ಮ ಕುಟುಂಬ ಸದಸ್ಯರ ಹುಟ್ಟುಹಬ್ಬದ ನೆನಪಿಗಾಗಿ ಅಥವಾ ಯಾವುದೇ ಸಂಭ್ರಮದ ನೆನಪಿಗಾಗಿ ನಿಮ್ಮೂರಿನ ಗ್ರಂಥಾಲಯಕ್ಕೆ ಅಥವಾ ನಿಮ್ಮೂರಿನ ಸರ್ಕಾರಿ ಶಾಲೆಗೆ ನಮ್ಮ ಕನ್ನಡದ ಸಂಪದ ಸಾಲು ಪತ್ರಿಕೆಯ ಸದಸ್ಯತ್ವವನ್ನು ಕೊಡುಗೆಯಾಗಿ ನೀಡಿ.
ನೀವು ಬರಹಗಾರರಾಗಿದ್ದರೆ ನಿಮ್ಮ ಬರವಣಿಗೆಗೆ ನಮ್ಮ ಪತ್ರಿಕೆ ವೇದಿಕೆಯಾಗಿ ನಿಮಗೆ ಮುಕ್ತ ಅವಕಾಶ ನೀಡಬಲ್ಲದು.
ನಿಮ್ಮದೇ ಉದ್ಯಮ,ವ್ಯವಹಾರಗಳಿದ್ದರೆ ನಮಗೊಂದು ಚಿಕ್ಕ ಜಾಹೀರಾತು ನೀಡಿ.ನಿಮ್ಮ ಸಂಸ್ಥೆಯ ಪ್ರಚಾರ 31000 ಮನೆಗೆ ಒಮ್ಮೆಲೆ ತಲುಪುತ್ತದೆ.
ಇನ್ನೇಕೆ ತಡ ಈ ಇಮೈಲ್ ನ್ನು ಕನಿಷ್ಟ 25 ಜನಕ್ಕೆ ಕಳುಹಿಸಿ.ನಿಮ್ಮದೇ ಪತ್ರಿಕೆ,ನೀವೇ ಬೆಳೆಸುತ್ತಿರುವ ಸಂಪದ ಸಾಲು ಪತ್ರಿಕೆ ನಿಮ್ಮಿಂದಲೇ ದಿಗಂತದೆತ್ತರಕ್ಕೇರಲಿ. ನಿಮ್ಮ ಈ ಚಿಕ್ಕ ಸಹಾಯ ಪಾಸಿಟಿವ್ ಜರ್ನಲಿಸಂ ನ ಉಳಿವಿಗೆ ಸಹಕಾರಿ.
ಢಾಂಬಿಕತೆಯನ್ನು ವಿರೋಧಿಸಿ, ಹೊಗಳುಭಟರೂ ಆಗದೆ, ಕ್ರೈಂಗಳನ್ನು ವಿಜೃಂಭಿಸದೆ, ಅಶ್ಲೀಲವಾದ ಬರಹಗಳನ್ನು ಪ್ರಕಟಿಸದೆ, ಒಳ್ಳೆಯದನ್ನು ಗುರುತಿಸಿ ಗೌರವಿಸುವ, ಬೆಳಕು ಮೂಡಿದಂತೆಲ್ಲಾ ಕತ್ತಲೆ ತಾನಾಗಿಯೇ ಹೊರಟು ಹೋಗುತ್ತದೆಂಬ ವಿಶ್ವಾಸದೊಂದಿಗೆ ಪಾಸೀಟಿವ್ ಜರ್ನಲಿಸಂಗಾಗಿ ಪ್ರಯತ್ನಿಸುತ್ತಿರುವ ಸಂಪದ ಸಾಲು ಪತ್ರಿಕೆಗೆ ಕನ್ನಡಿಗರ ಪ್ರೋತ್ಸಾಹ ಅತ್ಯಗತ್ಯ.
ನಮ್ಮ ಪತ್ರಿಕೆಯು ಕಳೆದ ಹತ್ತು ವರ್ಷಗಳಿಂದ ಕಥೆ, ಕವನ, ಲೇಖನ, ವಿಶ್ಲೇಷಣೆ ಹೀಗೆ ಸೃಜನಾತ್ಮಕ ಬರವಣಿಗೆಗಳಿಂದ ಸಾಹಿತ್ಯ ವಲಯದ ಸ್ವಸ್ಥ ಓದುಗರ ಮನ ಗೆದ್ದಿದೆ. ೪೮೦ ಕ್ಕೂ ಹೆಚ್ಚು ಬರಹಗಾರರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಕೃಷಿ, ಕೈಗಾರಿಕೆ, ಹಳ್ಳಿಯಲ್ಲಿನ ಸ್ವಾವಲಂಬಿ ಬದುಕು, ಸಾಧಕರ ಯಶೋಗಾಥೆ, ನಿಖರ ರಾಜಕೀಯ ಬರವಣಿಗೆಗಳ ಮೂಲಕ ೩೧,೦೦೦ ಓದುಗ ಸದಸ್ಯರನ್ನು ಹೊಂದಿದ್ದು ಸರ್ಕಾರದ ಮಾಧ್ಯಮ ಪಟ್ಟಿಯಲ್ಲಿಯೂ ಸ್ಥಾನಗಳಿಸಿಕೊಂಡಿದೆ. ಪತ್ರಿಕೆಗೆ ೧,೦೦,೦೦೦ ಓದುಗರನ್ನಾಗಿಸುವ ಕನಸಿನೊಂದಿಗೆ ಕನ್ನಡದ ಪತ್ರಿಕೆಯ ಬೆಳವಣಿಗೆಗಾಗಿ ಸಹೃದಯ ಕನ್ನಡಿಗರಲ್ಲಿ ಬಿನ್ನವಿಸುತ್ತಿದ್ದೇವೆ. ನಿಮ್ಮ ಪುಟ್ಟ ಪ್ರೋತ್ಸಾಹ ಪಾಸೀಟಿವ್ ಜರ್ನಲಿಸಂಗೆ ಹೊಸ ಭಾಷ್ಯ ಬರೆಯಬಲ್ಲದು.
ನೀವು ಮಾಡಬೇಕಾದ್ದಿಷ್ಟೆ,
ಸಂಪದ ಸಾಲು ಪತ್ರಿಕೆಗೆ ಚಂದಾದಾರರಾಗಿ ಮತ್ತು ನಿಮ್ಮ ಪರಿಚಿತರನ್ನೂ ಚಂದಾದಾರರನ್ನಾಗಿಸಿ.
ಚಂದಾ ವಿವರ ..
10yr 1500/-rs
15 Yr 2500/-rs
5000 Rs fr suporter
10000/- For life membership
account name sampada saalu. Karnataka bank.sagara branch sampada saalu Sb account no 7122500103160601
IFSC code KARB0000712
Or
Vijaya bank Sagara branch Sb Account sampa publications no 142901011001388
IFSC CODE VIJB0001429
ಇದಕ್ಕೆ ಹಣ ಕಳುಹಿಸಿ...
ಚಂದದಾರರಾಗಬಹುದು.
sampavenki@gmail.com sampadasa
contact :9448219347
ಚಂದಾ ಹಣವನ್ನು ಜಮಾ ಮಾಡಿದ ಬಳಿಕ
ದಯವಿಟ್ಟು ನಿಮ್ಮ ಹೆಸರು,ವಿಳಾಸ,ಪೋನ್
ನಂಬರ್.ಇಮೈಲ್ ಅಡ್ರೆಸ್ ನಮ್ಮ ಕಚೇರಿ ನಂಬರ್ ಗೆ
ಮೆಸೇಜ್ ಮಾಡಿ..
Wednesday, September 28, 2016
ಹರ್ಯಾಣದ ಹಾದಿಯಲ್ಲಿ, #ವೆಂಕಟೇಶಸಂಪ
ಹರ್ಯಾಣದ ಹಾದಿಯಲ್ಲಿ, #ವೆಂಕಟೇಶಸಂಪ
ಕುರುಕ್ಷೇತ್ರ ಅಂದ ತಕ್ಷಣ ಯುದ್ದ ಭೂಮಿ ಮತ್ತು ಮಹಾಭಾರತ ನೆನಪಿಗೆಬರುತ್ತದೆ. ಪಾಂಡವರು ಮತ್ತು ಕೌರವರು ತಮ್ಮ ಅಸ್ತಿತ್ವಕ್ಕಾಗಿ
18 ದಿನಗಳ ಕಾಲ ಯುದ್ದ ಮಾಡಿದ ಸ್ಥಳವೇ ಈ ಹರ್ಯಾಣ ಜಿಲ್ಲೆಯ ಕುರುಕ್ಷೇತ್ರ ಎಂಬ ಪೌರಾಣಿಕ ಹಿನ್ನೆಲೆಯಿದೆ.ಪ್ರಸ್ಥುತ ಒಂದು ಕೋಟಿ ಜನಸಂಖ್ಯೆಯ ಈ ಊರು 1947 ಕ್ಕೂ ಮೊದಲು ಸ್ಥಾನೇಶ್ವರ ಎಂಬ ಹೆಸರಿದ್ದರೂ ಈಗ ಕುರುಕ್ಷೇತ್ರವಾಗಿ ಮಾರ್ಪಾಡಾಗಿದೆ.
ಇಲ್ಲಿ ನೋಡಬೇಕಾದ ಸ್ಥಳವೆಂದರೆ ಬ್ರಹ್ಮ ಸರೋವರ. ದ್ವಾಪರ ಮತ್ತು ತ್ರೇತಾ ಯುಗದ ಮದ್ಯದಲ್ಲಿ ಕ್ಷತ್ರಿಯ ರಾಜ ಕಾರ್ತ್ಯವೀರ್ಯನಿಂದ ಕಾಮಧೇನುವಿಗಾಗಿ ಹತನಾದ ತಪಸ್ವಿ ಜಮಧಗ್ನಿ.ಅದರ ಸೇಡು ತೀರಿಸಿಕೊಳ್ಳಲು ಅವರ ಮಗನಾದ ಪರಶುರಾಮ 21 ಬಾರಿ ಭೂಮಂಡಲ ಸುತ್ತಿ ಕ್ಷತ್ರಿಯರನ್ನೆಲ್ಲಾ ನಾಶ ಮಾಡುತ್ತಾನೆ.ಆ ಸಂದರ್ಭದಲ್ಲಿ ಹರಿದ ನೆತ್ತರಿನ ಪರಿಣಾಮ ಈ ಸರೋವರವಾಗಿದೆ ಎಂಬುದು ಒಂದು ಕತೆಯಾದರೆ ಬ್ರಹ್ಮನೇ ಕುರುಕ್ಷೇತ್ರ ಯುದ್ದಕ್ಕಾಗಿ ನಿರ್ಮಿಸಿದ ಎನ್ನುವ ಕತೆಯೂ ಇದೆ.
ಯಾವುದು ಸರಿ ಎನ್ನುವುದು ನನಗೂ ತಿಳಿದಿಲ್ಲ.
ಕೃಶ್ಣನ ವಸ್ಥು ಸಂಗ್ರಹಾಲಯ, ಜ್ಯೋತಿಸರ್ ಎಂಬ ಭಗವದ್ಗೀತೆ ಬರೆದ ಸ್ಥಳ,ಸ್ಥಾನೇಶ್ವರ ಮಹದೇವ ದೇವಸ್ಥಾನ,
ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮ ಪಿತಾಮಹನ ಬಾಯರಿಕೆ ಈಡೇರಿಸಲು ಅರ್ಜುನ ಬಾಣ ಹೂಡಿದಾಗ ನೀರು ಬಂದ ಪ್ರದೇಶವಾದ ಭೀಷ್ಮಕುಂಡವೆಂಬ ಸರೋವರ,ಭದ್ರಕಾಳಿ ದೇವಸ್ಥಾನ,ಇತರೆ,
ಉಳಿದಂತೆ ಇಲ್ಲಿ ರಸ್ತೆಗಳು ಚೆನ್ನಾಗಿವೆ, ಅತಿ ಹೆಚ್ಚು ಭತ್ತ ಬೆಳೆಯೋ ರಾಜ್ಯದಲ್ಲಿ ಇದೂ ಒಂದು. 1966 ರಲ್ಲಿ ಹರ್ಯಾಣ ರಾಜ್ಯವಾಯಿತು.90 ವಿಧಾನಸಭಾ ಕ್ಷೇತ್ರಗಳಿವೆ. 3 ಕೋಟಿ ಜನಸಂಖ್ಯೆಯ ಈ ರಾಜ್ಯದಲ್ಲಿ ಸ್ವಚ್ಚತೆ ಬರಬೇಕಾಗಿದೆ.ಪಂಜಾಬ್ ಮತ್ತು ಹರ್ಯಾಣ ಎರಡಕ್ಕೂ ಒಂದೇ ರಾಜಧಾನಿ ಅದು ಚಂಡೀಗಡ.ಇನ್ನೂ ಹೆಚ್ಚು ತಿಳಿಯಲು ಓದಿ ಸಂಪದ ಸಾಲು ಪತ್ರಿಕೆ,
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ
Tuesday, September 27, 2016
ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ
ಉತ್ತರಾಖಂಡದಲ್ಲಿ ಉತ್ತರವ ಹುಡುಕುತ್ತಾ!#ವೆಂಕಟೇಶಸಂಪ
2013 ಜೂನ್ ನಿಮಗೆ ನೆನಪಿರಬಹುದು.ಎಂದೂ ಕೇಳರಿಯದ ಪ್ರವಾಹ ಒಮ್ಮೆಗೆ ಪ್ರವಹಿಸಿ ಇಡೀ ಉತ್ತರಾಖಂಡ ,ಕೇದಾರನಾಥ್,ಬದರಿ ಮುಂತಾದೆಡೆ ಪ್ರಕೃತಿ ತನ್ನ ರೌದ್ರಾವತಾರಕ್ಕೆ ಕೆಡವಿಬಿಟ್ಟಿತ್ತು.ಹಿಮಾಲಯದ ಪ್ರಾರಂಭವಾದ ಹೃಷಿಕೇಶ ಕೂಡ ನಲುಗಿಹೋಗಿತ್ತು.
ಈಗ ಗಂಗಾಮಾತೆ ಶಾಂತಳಾಗಿದ್ದಾಳೆ.ತನ್ನ ಮುನಿಸು ತೊರೆದು ಪ್ರೀತಿಯಿಂದ ನಮ್ಮನ್ನು ನೋಡುತ್ತಾಳೆ. ಹೃಷಿಕೇಶ ಮತ್ತು ಹರಿದ್ವಾರ ಎರಡೂ ಕೂಡ ಆಧ್ಯಾತ್ಮ, ಧ್ಯಾನ ,ದೇವರು, ಧರ್ಮದ ತಾಣ. ಇಲ್ಲಿ ಸಾಧು ಸಂತರುಗಳು ಇದ್ದಾರೆ.ಬಹುತೇಕ ಇಲ್ಲಿ ಇರುವುದು ಆಶ್ರಮಗಳು.
ಲಕ್ಷ್ಮಣ ಜೋಕಾಲಿ(ಜೂಲಾ)ರಾಮ ಜೋಕಾಲಿ,ಸ್ವರ್ಗಾಶ್ರಮ,ಗೀತ ಭವನ ಹಾಗು ಗಂಗಾ ನದಿಯ ಸುಂದರ ಹರಿವು, ಮಾನಸದೇವಿ ಮಂದಿರದ ರೋಪ್ ವೇ ಪ್ರಯಾಣ ಎಲ್ಲವೂ ಹಿತವೆನಿಸುತ್ತದೆ.
ಉತ್ತರಾಖಂಡ ರಾಜ್ಯದಲ್ಲಿರುವ ಗಂಗೆ ಸ್ವಚ್ಚವಾಗಿದ್ದಾಳೆ.ಪವಿತ್ರ ಗಂಗೆ ಶುದ್ದವೂ ಅತಿಯಾದ ತಂಪು ಕೂಡ ಹೌದು.
ಲೆಕ್ಕವಿಲ್ಲದಷ್ಟು ಆಶ್ರಮಗಳು ಮತ್ತು ಸಾಧುಸಂತರುಗಳ ಮದ್ಯೆ ನಿಜವಾದ ಆಧ್ಯಾತ್ಮ ಮತ್ತು ದೇವರು ಹುಡುಕುವುದು ನಿಜಕ್ಕೂ ಕಷ್ಟಸಾಧ್ಯ. ಅದೆಷ್ಟೋ ಜನರಿಗೆ ಬದುಕು ಕಲ್ಪಿಸಿಕೊಟ್ಟ ಗಂಗಾಮಾತೆಗೆ ಆರತಿ ಕಾರ್ಯಕ್ರಮ ದಿನವೂ ನೆಡೆಯುವುದರೊಂದಿಗೆ ಪ್ರಕೃತಿಯನ್ನು ಪೂಜಿಸಿ ಮತ್ತು ಸ್ವಚ್ಚವಾಗಿಡಿ ಎಂಬ ಸಂದೇಶವನ್ನು ಅರ್ಥಮಾಡಿಕೊಳ್ಳಬಹುದು.
#ವೆಂಕಟೇಶಸಂಪ #ಓದಿಸಂಪದಸಾಲುಪತ್ರಿಕೆ